Hanuman Chalisa Kannada PDF

[PDF] ಶ್ರೀ ಹನುಮಾನ್ ಚಾಲೀಸಾ – Shri Hanuman Chalisa Kannada PDF

[PDF] ಶ್ರೀ ಹನುಮಾನ್ ಚಾಲೀಸಾ – Shri Hanuman Chalisa Kannada PDF

ಈ ಪೋಸ್ಟ್ ಕನ್ನಡದಲ್ಲಿ ಹನುಮಾನ್ ಚಾಲೀಸಾ ಪಿಡಿಎಫ್ ಸೇರಿದಂತೆ ನಾಲ್ಕು ಆಯ್ಕೆಗಳನ್ನು ನೀಡುತ್ತದೆ

  • ಕನ್ನಡದಲ್ಲಿ ಹನುಮಾನ್ ಚಾಲಿಸಾ ಓದಿHanuman Chalisa Lyrics in Kannada
  • ಹನುಮಾನ್ ಚಾಲಿಸಾ ಕನ್ನಡ ಪಿಡಿಎಫ್ ಡೌನ್‌ಲೋಡ್ ಮಾಡಿDownload Hanuman Chalisa Kannada PDF
  • ಹನುಮಾನ್ ಚಾಲಿಸಾ ಕನ್ನಡ ಸಾಹಿತ್ಯ ವಿಡಿಯೋ ನೋಡಿWatch Hanuman Chalisa Kannada Lyrics Video
  • ಹನುಮಾನ್ ಚಾಲಿಸಾ ಕನ್ನಡ MP3 ಡೌನ್‌ಲೋಡ್ ಮಾಡಿDownload Hanuman Chalisa Kannada MP3

ಹನುಮಾನ್ ಚಾಲೀಸವನ್ನು ಕನ್ನಡದಲ್ಲಿ ಓದಿ

ಪ್ರಾರ್ಥನಾ ಶ್ಲೋಕ

ಶ್ರೀಗುರುಚರಣ ಸರೋಜ ರಜದಿಂ |

ಮನದರ್ಪಣ ಸ್ವಚ್ಛ ಮಾಡುವೆನು |

ನಾಲ್ಕು ಪುರುಷಾರ್ಥವನೀವ |

ಶ್ರೀರಾಮ ಕೀರ್ತಿಯ ಬಣ್ಣಿಸಿ ಪಾಡುವೆನು ||

ಬುದ್ಧಿಹೀನನ ಮೊರೆಯನಾಲಿಸಿ |

ಪವನ ಕುಮಾರ ಸುಬುದ್ಧಿಯ ನೀಡು |

ಪಂಚಕ್ಲೇಶ ಷಡ್ವಿಕಾರಗಳನು |

ನಾಶಗೊಳಿಸಿ ಬಲಬುದ್ಧಿಯ ನೀಡು ||

ಹನುಮಾನ್ಚಾಲೀಸ

ಜಯ ಹನುಮಾನ ಜ್ಞಾನಗುಣಸಾಗರ

ಜಯ ಕಪೀಶ ಮೂರ್ಲೋಕ ಪ್ರಭಾಕರ ||1||

ರಾಮದೂತ ಅತುಲಿತ ಬಲಧಾಮ

ಅಂಜನಿಪುತ್ರ ಪವನಸುತ ನಾಮ ||2||

ಮಹಾವೀರ ವಿಕ್ರಮ ಬಜರಂಗೀ

ಕುಮತಿ ನಿವಾರಕ ಸುಮತಿಯ ಸಂಗೀ ||3||

ಕಾಂಚನ ರಂಜತ ಸುಂದರ ವೇಷ

ಕರ್ಣಕುಂಡಲ ಗುಂಗುರುಕೇಶ ||4||

ವಜ್ರಗದಾಧರ ಧ್ವಜಕರಶೋಭಿತ

ಸುಂದರಭುಜ ಉಪವೀತ ಅಲಂಕೃತ ||5||

ಶಂಕರಕುವರ ಕೇಸರೀ ನಂದನ

ತೇಜಪ್ರತಾಪ ಮಹಾ ಜಗವಂದನ ||6||

ವಿದ್ಯಾವಾನ ಗುಣೀ ಅತಿ ಚತುರ

ರಾಮಕಾರ್ಯವೆಸಗೆ ಬಲು ಕಾತುರ ||7||

ಪ್ರಭುಕಥೆ ಕೇಳುತ ಮೈಮರೆವಾತ

ಮನವಿ ರಾಮ ಸೌಮಿತ್ರಿ ಸೀತ ||8||

ಸೂಕ್ಷ್ಮರೂಪವನು ಸೀತೆಗೆ ತೋರಿದೆ

ವಿಕಟರೂಪದಲಿ ಲಂಕೆಯ ದಹಿಸಿದೆ ||9||

ಭೀಮರೂಪದಲಿ ಅಸುರರ ಕೊಂದೆ

ರಾಮಚಂದ್ರನ ಕಾರ್ಯವೆಸಗಿದೆ ||10||

ಮೂಲಿಕೆ ತಂದು ಸೌಮಿತ್ರಿಯ ಪೊರೆದೆ

ರಾಮನ ಪ್ರೀತಿಯ ಅಪ್ಪುಗೆ ಪಡೆದೆ ||11||

ಭರತನಂತೆ ನೀನು ಪ್ರಿಯಸಹೋದರ

ಎನ್ನುತ ಹೊಗಳಿದ ಶ್ರೀರಘುವೀರ ||12||

ಸಹಸ್ರಮುಖವು ನಿನ್ನ ಸ್ತುತಿಸಿದೆ

ಎನ್ನುತ ಶ್ರೀಪತಿ ಆಲಿಂಗಿಸಿದ ||13||

ಸನಕಬ್ರಹ್ಮಾದಿ ಮುನಿವರೇಣ್ಯರು

ನಾರದ ಶಾರದೆ ಆದಿಶೇಷರು ||14||

ಯಮಕುಬೇರ ದಿಕ್ಪಾಲಕರೆಲ್ಲರು

ಕವಿಕೋವಿದರು ನಿನ್ನ ಸ್ತುತಿಸಿಹರು ||15||

ಸುಗ್ರೀವಗೆ ನೀ ಸಹಾಯ ಮಾಡಿದೆ

ರಾಮಸಖ್ಯದಿ ರಾಜ್ಯ ಕೊಡಿಸಿದೆ ||16||

ನಿನ್ನುಪದೇಶ ವಿಭೀಷಣ ಒಪ್ಪಿದ

ಲಂಕೇಶನಾದುದ ಜಗವೇ ಬಲ್ಲದು ||17||

ಮಧುರ ಹಣ್ಣೆಂದು ತಿಳಿದು ರವಿಯನು

ಪಿಡಿಯೆ ಹಾರಿದೆ ಸಹಸ್ರಯೋಜನ ||18||

ಪ್ರಭುಮುದ್ರಿಕೆಯನು ಧರಿಸಿ ಬಾಯಲಿ

ಶರಧಿ ಲಂಘನವು ಸೋಜಿಗವಲ್ಲ ||19||

ಎಷ್ಟೇ ಕಠಿಣ ಕಾರ್ಯವೇ ಇರಲಿ

ಅಷ್ಟೇ ಸುಲಭ ನಿನ್ನ ಕೃಪೆಯಿಂದಲಿ ||20||

ರಾಮನ ದ್ವಾರಪಾಲಕ ನೀನು

ನಿನ್ನಾಜ್ಞೆ ವಿನಾ ಒಳ ಬರಲಾರೆನು ||21||

ಸುಖವೆಲ್ಲ ನಿನಗೆ ಶರಣಾಗಿ ಇರಲು

ಭಯವೇಕೆ ಎಮಗೆ ನೀ ರಕ್ಷಿಸಲು ||22||

ನಿನ್ನ ತೇಜ ನಿನ್ನಂದಲೆ ಶಮನ

ನಿನ್ನ ಘರ್ಜನೆಗೆ ತ್ರಿಲೋಕ ಕಂಪನ ||23||

ಮಹಾವೀರ ನಿನ್ನ ನಾಮವ ಕೇಳಲು

ಸನಿಹಕೆ ಬರದು ಭೂತಪ್ರೇತಗಳು ||24||

ಹನುಮ ನಿನ್ನನು ಸದಾ ಭಜಿಸಲು

ನಾಶವಾಗುವುವು ರೋಗರುಜಗಳು ||25||

ಹನುಮನ ಧ್ಯಾನಿಸೆ ತ್ರಿಕರಣದಿಂದ

ಕಷ್ಟಕಾರ್ಪಣ್ಯವು ದೂರಾಗುವುದು ||26||

ತಪಸ್ವೀರಾಮನ ಕಾರ್ಯಗಳೆಲ್ಲವ

ಯಶಸ್ಸಿನಿಂದ ಸಫಲಗೊಳಿಸಿದವ ||27||

ನೆರವೇರಿಸುತಲಿ ಭಕ್ತರಾಭೀಷ್ಟವ

ಅಮಿತ ಫಲವನು ನೀ ಕರುಣಿಸುವೆ ||28||

ನಾಲ್ಕು ಯುಗಗಳಲೂ ಪ್ರತಾಪ ನಿನ್ನದೆ

ನಿನ್ನಯ ಪ್ರಭೆಯ ಲೋಕ ಬೆಳಗಿದೆ ||27||

ಸಾಧುಸಂತರನು ಪೊರೆದು ಸಲಹಿದೆ

ಅಸುರರ ಕೊಂದು ರಾಮಪ್ರಿಯನಾದೆ ||20||

ಅಷ್ಟಸಿದ್ಧಿ ನವನಿಧಿಯ ಕೊಡುವವ

ಜಾನಕಿ ಮಾತೆಯಿಂ ವರವ ಪಡೆದವ ||31||

ನಿನ್ನಲಿ ಇರಲು ರಾಮರಸಾಯನ

ಸದಾ ರಘುಪತಿಯ ದಾಸನು ನೀನು ||32||

ನಿನ್ನ ಭಜಿಸಿದವ ರಾಮನ ಪಡೆವ

ಜನ್ಮಜನ್ಮದ ದುಃಖವ ಮರೆವ ||33||

ಜೀವಿಸಿರಲು ಹರಿಭಕ್ತನೆನಿಸುವ

ಅಂತ್ಯಸಮಯದಿ ರಾಮನ ಸೇರುವ ||34||

ಅನ್ಯದೇವರನು ಭಜಿಸದಿದ್ದರು

ಹನುಮನ ಸೇವಿಸೆ ಸುಖವ ಪಡೆವರು ||35||

ವೀರ ಹನುಮನ ಭಜಿಸಲು ಭಕ್ತರು

ವ್ಯಾಧಿ ಸಂಕಟದಿ ಮುಕ್ತಿ ಪಡೆವರು ||36||

ಜಯ ಜಯ ಜಯ ಹನುಮಾನ ಗೋಸಾಯಿ

ಗುರುವಿನಂದದಿ ಕೃಪೆ ಇದು ಸಾಯಿ ||37||

ನೂರು ಬಾರಿ ಇದ ಪಠಣ ಮಾಡಿದವ

ಬಂಧನ ಕಳಚುತ ನಿಜ ಸುಖ ಪಡೆವ ||38||

ಯಾರು ಪಠಿಸುವರೊ ಹನುಮ ಚಾಲೀಸ

ಸಿದ್ಧಿ ಪಡೆಯುವರು ಸಾಕ್ಷಿ ಗೌರೀಶ ||39||

ತುಲಸೀದಾಸ ಸದಾ ಹರಿಭಕ್ತ

ವಾಸಿಸು ಎನ್ನ ಹೃದಯದಿ ನಾಥ ||40||

ಪರಮ ಭಕ್ತ ಶ್ರೀ ತುಲಸೀದಾಸರ

ಚರಣಕೆ ವಂದಿಪೆ ನಿತ್ಯ ನಿರಂತರ ||41||

ಕನ್ನಡದಲ್ಲಿ ಹನುಮಾನ್ ಚಾಲೀಸಾ PDF ಅನ್ನು ಡೌನ್‌ಲೋಡ್ ಮಾಡಿ – Download Hanuman Chalisa PDF in Kannada

ಹನುಮಾನ್ ಚಾಲಿಸಾ ಕನ್ನಡ ಹಾಡಿನ ವಿಡಿಯೋ ನೋಡಿ

Download Hanuman Chalisa Kannada MP3 download 

Hanuman Chalisa in Kannada – Play it online

Read More

Similar Posts